SONU NIGAM - Paravashanadenu 歌词

ಪರವಶನಾದೆನು ಅರಿಯುವ ಮುನ್ನವೇ ಪರಿಚತನಾಗಲಿ ಹೇಗೆ ಪ್ರಣಯಕು ಮುನ್ನವೇ
ಇದಕ್ಕಿಂತ ಬೇಗ ಇನ್ನು ಸಿಗಬಾರದಿತ್ತೆ ನೀನು ಇನ್ನಾದರೂ ಕೂಡಿಟ್ಟುಕೊ ನೀ ನನ್ನನು ಕಳೆಯುವ ಮುನ್ನವೇ
ಪರವಶನಾದೆನು ಅರಿಯುವ ಮುನ್ನವೇ ಪರಿಚತನಾಗಲಿ ಹೇಗೆ ಪ್ರಣಯಕು ಮುನ್ನವೇ

ನಿನ್ನ ಕಣ್ಣಿಗಂತು ನಾನು ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು ಪ್ರೇಮಯೋಗಿಯಾಗಲು
ಓ ಅರಳುವ ಸದ್ದನು ನಿನ್ನ ನಗೆಯಲು ಕೇಳಬಲ್ಲೆ
ನನ್ನ ಏಕಾಂತವನ್ನು ತಿದ್ದಿಕೊಡು ನೀನೀಗ ನಿಂತಲ್ಲೆ
ನಾನೇನೆ ಅಂದರೇನು ನನಗಿಂತ ಚೂಟಿ ನೀನು ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನು ಕದಿಯುವ ಮುನ್ನವೇ

ಪರವಶನಾದೆನು ಅರಿಯುವ ಮುನ್ನವೇ ಪರಿಚತನಾಗಲಿ ಹೇಗೆ ಪ್ರಣಯಕು ಮುನ್ನವೇ

ಕನಸಲಿ ತುಂಬಾ ಕೆಟ್ಟಿರುವೆನು ನಿನ್ನನು ಕೇಳದೆ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ
ನನ್ನ ಕೌತುಕ ಒಂದೊಂದೇ ಹೇಳಬೇಕು ಆಲಿಸುವಾಗ ನೋಡು ನನ್ನನ್ನೆ ಸಾಕು
ಸಹವಾಸದೋಷದಿಂದ ಸರಿ ಹೋಗಬಹುದೇ ನಾನು
ನನಗಾಗಿಯೇ ಕಾದಿಟ್ಟುಕೊ ಹಟವೊಂದನ್ನು ಕೆಣಕುವ ಮುನ್ನವೇ
ಪರವಶನಾದೆನು ಅರಿಯುವ ಮುನ್ನವೇ ಪರಿಚತನಾಗಲಿ ಹೇಗೆ ಪ್ರಣಯಕು ಮುನ್ನವೇ
这个歌词已经 144 次被阅读了